ಓಲ್ಡ್ ಮಾಂಕ್ 2022 ರ ಭಾರತೀಯ ಕನ್ನಡ ಭಾಷೆಯ ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರವಾಗಿದ್ದು ಎಂ. ಜಿ. ಶ್ರೀನಿವಾಸ್ ಬರೆದು,ನಿರ್ದೇಶಿಸಿ,ನಟಿಸಿದ್ದಾರೆ. ಎಂ ಜಿ ಶ್ರೀನಿವಾಸ್, ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಲನಚಿತ್ರ ಶೀರ್ಷಿಕೆಯು ಅದೇ ಹೆಸರಿನ ಜನಪ್ರಿಯ ಆಲ್ಕೋಹಾಲ್ ಪಾನೀಯ ಬ್ರಾಂಡ್‌ನಿಂದ ಪ್ರೇರಿತವಾಗಿದೆ. ಕನ್ನಡದಲ್ಲಿ "ಹಳೆ ಸಂನ್ಯಾಸಿ" ಎಂದರ್ಥ. ಹಿರಿಯ ನಟ ರಾಜೇಶ್ ಅವರು ಚಲನಚಿತ್ರದಲ್ಲಿ ವಿಶೇಷ ಅತಿಥಿ ಪಾತ್ರವನ್ನು ನಿರ್ವಹಿಸಿದ್ದಾರೆ ಮತ್ತು ಫೆಬ್ರವರಿ 2022 ರಲ್ಲಿ ನಿಧನರಾಗುವ ಮೊದಲು ಅವರ ಅಭಿನಯಿಸಿದ ಚಿತ್ರವಾಗಿದೆ. ಚಿತ್ರವು 25 ಫೆಬ್ರವರಿ 2022 ರಂದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾಯಿತು. ವಿಮರ್ಶಕರು ಈ ಚಿತ್ರದ ನಿರ್ದೇಶನ, ಹಾಸ್ಯ, ಸಾಹಿತ್ಯ, ಸಂಭಾಷಣೆ ಮತ್ತು ಅಭಿನಯಗಳನ್ನು ಶ್ಲಾಘಿಸಿದರು. == ಕಥೆಯ ಹಿನ್ನೆಲೆ == ನಾರದನು ಕೃಷ್ಣ ಮತ್ತು ರುಕ್ಮಿಣಿಯರ ನಡುವೆ ಜಗಳವನ್ನು ಸೃಷ್ಟಿಸಿದ ನಂತರ ಶ್ರೀಕೃಷ್ಣನಿಂದ ಶಾಪಗ್ರಸ್ತನಾಗಿ ಭೂಮಿಗೆ ಬರುತ್ತಾನೆ. ಅವನು ತನ್ನನ್ನು ತಾನು ಉದ್ಧಾರ ಮಾಡಿಕೊಳ್ಳುವ ಏಕೈಕ ಮಾರ್ಗವೆಂದರೆ ಭೂಮಿಯಲ್ಲಿ ಅವನು ಪ್ರೀತಿಸುವವರನ್ನು ಮದುವೆಯಾಗುವುದು. ನಾರದನು ಈಗ ಅಪ್ಪಣ್ಣ ಎಂಬ ಹೆಸರಿನಲ್ಲಿ , ಕೇವಲ ಅರೇಂಜ್ಡ್ ಮ್ಯಾರೇಜ್‌ನಲ್ಲಿ ನಂಬಿಕೆಯಿಡುವ ಕುಟುಂಬದಲ್ಲಿ ಜನಿಸಿದ್ದಾನೆ ಮತ್ತು ಅವನ ತಂದೆ ಖಳನ ಪಾತ್ರದಲ್ಲಿದ್ದು ಅವನಿಗೆ ಪ್ರೀತಿಯನ್ನು ಕಂಡುಕೊಳ್ಳುವ ಅವಕಾಶವಿಲ್ಲ. ಅವನು ತನ್ನ ಪ್ರಿಯತಮೆಯನ್ನು ಕಂಡುಕೊಳ್ಳಲು ಅನೇಕ ಅಡಚಣೆಗಳಿವೆ. == ಪಾತ್ರವರ್ಗ == ಅಪ್ಪಣ್ಣನ ಮತ್ತು ನಾರದನಾಗಿ ಎಂ. ಜಿ. ಶ್ರೀನಿವಾಸ್ ಅಭಿಗ್ನಳ ಪಾತ್ರದಲ್ಲಿ ಅದಿತಿ ಪ್ರಭುದೇವ ಅಪ್ಪಣ್ಣನ ತಂದೆ ನಾರಾಯಣನಾಗಿ ಎಸ್.ನಾರಾಯಣ್ ರಣವೀರ್ ಸಿಂಗ್ ಪಾತ್ರದಲ್ಲಿ ಸುಜಯ್ ಶಾಸ್ತ್ರಿ ಶಶಾಂಕ್ ರಾಧಾಕೃಷ್ಣನಾಗಿ ಸುದೇವ್ ನಾಯರ್ ಅಪ್ಪಣ್ಣನ ತಾಯಿ ಅರುಣಾಳ ಪಾತ್ರದಲ್ಲಿ ಅರುಣಾ ಬಾಲರಾಜ್ ಅಭಿಗ್ನನ ತಂದೆಯಾಗಿ ಸಿಹಿ ಕಹಿ ಚಂದ್ರು ಮಾಜಿ ಸಚಿವ ರಾಧಾಕೃಷ್ಣನಾಗಿ, ಅಶೋಕ್ ಹೆಗಡೆ ಬೆಂಗಳೂರು ನಾಗೇಶ್ ಕಲಾತಪಸ್ವಿ ರಾಜೇಶ್ ಎಲ್ ಐಸಿ ಶ್ಯಾಮರಾಯನಾಗಿ ಅತಿಥಿ ಪಾತ್ರದಲ್ಲಿ ಕೃಷ್ಣನಾಗಿ ಸುನೀಲ್ ರಾವ್, ವಿಸ್ತೃತ ಅತಿಥಿ ಪಾತ್ರದಲ್ಲಿ ರುಕ್ಮಿಣಿಯಾಗಿ ಮೇಘಶ್ರೀ ಪಿ ಡಿ ಸತೀಶ್ ಚಂದ್ರ == ಧ್ವನಿಮುದ್ರಿಕೆ == ಎಲ್ಲಾ ಹಾಡುಗಳನ್ನು ಸೌರಭ್ ವೈಭವ್ ಸಂಯೋಜಿಸಿದ್ದಾರೆ. ಮತ್ತು ಆನಂದ್ ಆಡಿಯೋ ಲೇಬಲ್ ಅಡಿಯಲ್ಲಿ ಬಿಡುಗಡೆಯಾಗಿದೆ. ಗುಬ್ಬಿ ಬರೆದು ಹಾಡಿರುವ "ಓಲ್ಡ್ ಈಸ್ ಗೋಲ್ಡು" ಹಾಡಿನಲ್ಲಿ , ಫೋಟೋಶಾಪ್ ಮಾಡಿದ ಪೋಸ್ಟರ್ ಬಳಸಿ ಪ್ರಸಿದ್ಧ ಚಲನಚಿತ್ರಗಳಿಗೆ ಗೌರವ ಸಲ್ಲಿಸಲಾಗಿದೆ. == ಬಿಡುಗಡೆ == ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಚಲನಚಿತ್ರ ಬಿಡುಗಡೆ ಹಲವಾರು ಬಾರಿ ಮುಂದೂಡಲ್ಪಟ್ಟಿದೆ. ಇತರ ಚಿತ್ರಗಳೊಂದಿಗೆ ಸ್ಪರ್ಧೆಯನ್ನು ತಪ್ಪಿಸಲು ಮತ್ತು ಸಾಂಕ್ರಾಮಿಕ ನಂತರದ ಚತ್ರಮಂದಿರಗಳಲ್ಲಿ 100% ಆಸನಗಳನ್ನು ಅನುಮತಿಸುವ ಸರ್ಕಾರದ ನಿರ್ಧಾರವನ್ನು ಆಧರಿಸಿ ಚಲನಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ನಿರ್ದೇಶಕ ಶ್ರೀನಿ ಘೋಷಿಸಿದರು. ಚಲನಚಿತ್ರವು 25 ಫೆಬ್ರವರಿ 2022 ರಂದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==